ಶಿವಮೊಗ್ಗದಲ್ಲಿ ವೈಭವಯುತ ವಿಜಯದಶಮಿ: ಬೆಳ್ಳಿ ಅಂಬಾರಿಯಲ್ಲಿ ಚಾಮುಂಡಿ ತಾಯಿ ಮೆರವಣಿಗೆ - ಶಿವಮೊಗ್ಗದಲ್ಲಿ ವೈಭವಯುತ ವಿಜಯದಶಮಿ
ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ದಸರಾ ಅದ್ದೂರಿಯಾಗಿ ತೆರೆ ಕಂಡಿದೆ. ಕಳೆದ ಒಂಭತ್ತು ದಿನಗಳಿಂದ ವೈಭವವಾಗಿ ದಸರಾವನ್ನು ಶಿವಮೊಗ್ಗ ಮಹಾನಗರ ಪಾಲಿಕೆ ಆಚರಿಸಿಕೊಂಡು ಬಂದಿತ್ತು. ನವರಾತ್ರಿಯ ಕೊನೆ ದಿನ ವಿಜಯ ದಶಮಿಯಂದು ಶಿವಮೊಗ್ಗ ತಾಲೂಕು ತಹಸೀಲ್ದಾರ್ ಗಿರೀಶ್ ರವರು ಬನ್ನಿ ಮುಡಿಯುವ ಮೂಲಕ ದಸರಾಕ್ಕೆ ತೆರೆ ಎಳೆದಿದ್ದಾರೆ.