ಶಿವಸೇನೆಗೆ ಬಿಜೆಪಿಯೊಂದಿಗೆ ಹೋಗುವುದೊಂದೇ ಉಳಿದಿರುವ ದಾರಿ: ಡಿ.ವಿ.ಸದಾನಂದ ಗೌಡ - ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು
ಮಂಗಳೂರು: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ರಾಜ್ಯಪಾಲರು ಬಿಜೆಪಿಗೆ ಆಹ್ವಾನ ನೀಡಿರುವುದರಿಂದ ಶಿವಸೇನೆ ದಾರಿಗೆ ಬರಬಹುದು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಶಿವಸೇನೆ ಹಿಂದಿನಿಂದಲೂ ಒಟ್ಟಾಗಿ ಇತ್ತು. ಕಾಂಗ್ರೆಸ್, ಎನ್ಸಿಪಿ ಜೊತೆ ಹೋಗಲು ಶಿವಸೇನೆಗೆ ಸಾಧ್ಯವಿಲ್ಲ. ಸ್ವತಂತ್ರವಾಗಿಯೂ ಇರಲು ಆ ಪಕ್ಷಕ್ಕೆ ಸಾಧ್ಯವಿಲ್ಲ. ಬಿಜೆಪಿಯೊಂದಿಗೆ ಹೋಗುವುದು ಒಂದೇ ದಾರಿ ಅವರಿಗಿರುವ ದಾರಿ. ಹಾಗಾಗಿ ಶೀಘ್ರದಲ್ಲೇ ಅಲ್ಲಿ ಫಡ್ನವಿಸ್ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.