ಈ ಬಾರಿ ಕಳೆಕಟ್ಟದ ಶಿವರಾತ್ರಿ: ಮಾರುಕಟ್ಟೆಯತ್ತ ಮುಖ ಮಾಡದ ಗ್ರಾಹಕ - bangalore latest news
ನಾಳೆ ನಾಡಿನಾದ್ಯಂತ ಶಿವರಾತ್ರಿ. ಹಬ್ಬ ಬಂತೆಂದರೆ ಹೂ-ಹಣ್ಣು ಸೇರಿ ಎಲ್ಲದರ ಬೆಲೆ ಗಗನಕ್ಕೇರುತ್ತೆ. ಹಬ್ಬದ ಬಂಪರ್ ನಿರೀಕ್ಷೆಯಲ್ಲಿದ್ದ ಹೂ ಹಣ್ಣು ಕಾಯಿ ಸೇರಿ ತರಕಾರಿ ಮಾರಾಟಗಾರರಿಗೆ ಈ ಬಾರಿ ನಿರಾಸೆಯಾಗಿದೆ. ಯಾಕೆಂದರೆ, ಈ ಬಾರಿ ಗ್ರಾಹಕ ಮಾರುಕಟ್ಟೆಯತ್ತಲೇ ಮುಖ ಮಾಡದಿರುವುದು ವ್ಯಾಪಾರಿಗಳನ್ನ ದಿಕ್ಕೆಡುವಂತೆ ಮಾಡಿದೆ. ಅಂದ ಹಾಗೆ ಹಬ್ಬದ ನಿಮಿತ್ತ ಕೆ.ಆರ್ ಮಾರ್ಕೆಟ್ಗೆ ಹಲವು ಬಗೆಯ ಹೂ, ಹಣ್ಣು, ತರಕಾರಿ ಎಲ್ಲವೂ ಬಂದಿದ್ದು, ಬೆಲೆಯೂ ಕಡಿಮೆ ಇದೆ. ಆದರೂ ಗ್ರಾಹಕ ಮಾತ್ರ ಖರೀದಿಗೆ ಉತ್ಸಾಹ ತೋರದಿರುವುದು ಮಾರುಕಟ್ಟೆಯಲ್ಲಿ ಓಡಾಡಿದಾಗ ಕಂಡು ಬಂತು.