ಕುದ್ರೋಳಿ ಶ್ರೀಗೋಕರ್ಣನಾಥ ದೇವಳದಲ್ಲಿ ಶಿವರಾತ್ರಿ ಜಾಗರಣೆ - ಮಂಗಳೂರು
ಮಂಗಳೂರು: ಲೋಕ ಪ್ರಸಿದ್ಧ ಕುದ್ರೋಳಿ ಶ್ರೀಗೋಕರ್ಣನಾಥ ದೇವಾಲಯದಲ್ಲಿ ಶಿವರಾತ್ರಿ ಜಾಗರಣೆಯ ನಿಮಿತ್ತ ಭಕ್ತಿ ಸಂಭ್ರಮದಿಂದ ಶ್ರೀ ಗೋಕರ್ಣನಾಥ ದೇವರಿಗೆ ವಿಶೇಷ ಪೂಜೆ ನೆರವೇರಿತು. ಮಹಾ ಶಿವರಾತ್ರಿ ಹಿನ್ನೆಲೆ ವಿರಾರು ಭಕ್ತರು ಶ್ರೀ ಗೋಕರ್ಣನಾಥ ದೇವರ ದರ್ಶನ ಪಡೆದು ಪುನೀತರಾದರು. ಶಿವರಾತ್ರಿ ನಿಮಿತ್ತ ಮಹಾರುದ್ರಾಭಿಷೇಕ, ಮಹಾಶಿವರಾತ್ರಿ ಜಾಗರಣೆ ಬಲಿ, ರಥೋತ್ಸವ ಸಹಿತ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರುತ್ತಿವೆ.
TAGGED:
ಮಂಗಳೂರು