ಶಿವಾರಾಧನೆ.. ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿ ಜನತೆ! - ಹುಬ್ಬಳ್ಳಿ ಲೆಟೆಸ್ಟ್ ನ್ಯೂಸ್
ಮಹಾಶಿವರಾತ್ರಿ ಹಬ್ಬದ ನಿಮಿತ್ತ ಹುಬ್ಬಳ್ಳಿ ನಗರದ ಬಹುತೇಕ ಶಿವನ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಪೂಜೆ ಜರುಗಿವೆ. ದೇವರ ದರ್ಶನಕ್ಕೆ ಭಕ್ತಸಾಗರವೇ ಹರಿದು ಬಂತು. ಇಂದು ಬೆಳಗ್ಗೆಯಿಂದಲೇ ನಗರದ ಸ್ಟೇಶನ್ ರಸ್ತೆಯ ಈಶ್ವರ ದೇವಸ್ಥಾನ, ಶಿರಡಿ ಸಿದ್ಧಾರೂಢ ಮಠ, ಮೂರು ಸಾವಿರ ಮಠ, ಹೆಗ್ಗೇರಿಯ ಶಿವಪುರ ಕಾಲೋನಿ ಶಿವಮಂದಿರ, ಸಾಯಿಬಾಬಾ ಮಂದಿರ, ದುರ್ಗಾದೇವಿ ದೇವಸ್ಥಾನ ಸೇರಿ ಬಹುತೇಕ ದೇವಸ್ಥಾನದಲ್ಲಿ ಭಕ್ತರು ಆಗಮಿಸಿ ಭಕ್ತಿ ಪೂರ್ವಕ ಪೂಜೆ ಸಲ್ಲಿಸುತ್ತಿರುವ ದೃಶ್ಯ ಕಂಡು ಬಂದವು.