ಸುಮಲತಾ ಮಾಯಾಂಗನೆ: ಮತ್ತೆ ಕೆಂಡ ಉಗುಳಿದ ಶಿವರಾಮೇಗೌಡ - ಸಂಸದ ಶಿವರಾಮೇಗೌಡ
ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮಾಯಾಂಗನೆಯಂತೆ ವರ್ತಿಸುತ್ತಿದ್ದಾರೆ. ಜಯಲಲಿತಾರನ್ನು ಅವರು ಮೀರಿಸ್ತಾರೆ ಎನ್ನುವ ಮೂಲಕ ಮಂಡ್ಯ ಸಂಸದ ಶಿವರಾಮೇಗೌಡ, ಸುಮಲತಾ ವಿರುದ್ಧ ಮತ್ತೆ ವಾಗ್ದಾಳಿ ಮಾಡಿದರು. ಇವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸುಮಲತಾ, ಅವರಾಡುವ ಮಾತುಗಳನ್ನ ರಾಜ್ಯದ ಜನ ನೋಡುತ್ತಿದ್ದಾರೆ. ಯಾವತ್ತೂ ಅವರು ಹೆಣ್ಣಿಗೆ ಗೌರವ ಕೊಡುವ ಮಾತುಗಳನ್ನಾಡಿಲ್ಲ ಎಂದಿದ್ದಾರೆ.