ಕೊರೊನಾ ಏರಿಕೆ ನಡುವೆ ಎಚ್ಚೆತ್ತ ಪೊಲೀಸರು..ಶಿವಮೊಗ್ಗ ನಗರ ಸಂಪೂರ್ಣ ಲಾಕ್..ಗ್ರೌಂಡ್ ರಿಪೋರ್ಟ್ - ಶಿವಮೊಗ್ಗ ಕೊರೊನಾ ಪ್ರಕರಣ ಸಂಖ್ಯೆ
ಶಿವಮೊಗ್ಗ: ಕೊರೊನಾ ಪ್ರಕರಣಗಳು ಹೆಚ್ಚಾದ ಕಾರಣ ರಾಜ್ಯ ಸರ್ಕಾರ 14 ದಿನಗಳ ಕಠಿಣ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಿದೆ. ಆದರೆ ಶಿವಮೊಗ್ಗದಲ್ಲಿ ಕೇವಲ ಅಂಗಡಿ, ಮುಗ್ಗಟ್ಟುಗಳ ಬಂದ್ಗೆ ಕರ್ಫ್ಯೂ ಸೀಮಿತವಾಗಿತ್ತು. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆ ವರೆಗೆ ಅವಕಾಶ ನೀಡಲಾಗಿತ್ತು. ಆದರೂ ಸಹ ಶಿವಮೊಗ್ಗದಲ್ಲಿ ಮಾತ್ರ ಅನಗತ್ಯವಾಗಿ ಓಡಾಡುವರ ಸಂಖ್ಯೆ ಮಾತ್ರ ಕಡಿಮೆ ಆಗಿರಲಿಲ್ಲಾ. ಹಾಗಾಗಿ ಸಚಿವ ಕೆಎಸ್ ಈಶ್ವರಪ್ಪ ನಿನ್ನೆ ಸಭೆಯಲ್ಲಿ ಜಿಲ್ಲೆಯಲ್ಲಿ ಅನಗತ್ಯವಾಗಿ ಓಡಾಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ ,ಇದರ ಮಧ್ಯೆ ಕೊರೊನಾ ಪ್ರಕರಣಗಳು ಸಹ ಜಿಲ್ಲೆಯಲ್ಲಿ ಹೆಚ್ಚುತ್ತಿದೆ. ಪೋಲಿಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದ್ದರು. ಈ ಸೂಚನೆ ಬೆನ್ನಲ್ಲೆ ಪೋಲಿಸರು ಇಂದು ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ರಸ್ತೆ ಸಂಚಾರ ಸಂಪೂರ್ಣ ಬಂದ್ ಮಾಡಿದ್ದಾರೆ. ಈ ಕುರಿತು ಗ್ರೌಂಡ್ ರಿಪೋರ್ಟ್ ಇಲ್ಲಿದೆ