ಮಾರುಕಟ್ಟೆಗೆ ಮುಗಿಬಿದ್ದ ಜನ....ಲಾಠಿ ಹಿಡಿದ ತಹಶೀಲ್ದಾರ್ ಗಿರೀಶ್ - shivamogga latest news
ಎಲ್ಲೆಡೆ ಲಾಕ್ಡೌನ್ ಇದ್ದರೂ ಸಹ ನಾಳೆ ಯುಗಾದಿ ಹಬ್ಬದ ಸಲುವಾಗಿ ಶಿವಮೊಗ್ಗದ ಪ್ರಮುಖ ತರಕಾರಿ ಮಂಡಿ ಹಾಗೂ ತರಕಾರಿ ಮಾರುಕಟ್ಟೆಯಲ್ಲಿಂದು ಜನ ಮುಗಿಬಿದ್ದು ಖರೀದಿ ಮಾಡಿದ್ದಾರೆ. ಪೊಲೀಸರು ಜನರನ್ನು ತಡೆದರೂ ಸಹ ಜನ ಮುಗಿಬಿದ್ದು ಖರೀದಿ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಶಿವಮೊಗ್ಗ ತಹಶೀಲ್ದಾರ್ ಗಿರೀಶ್ರವರು ಜನರಿಗೆ ಹಾಗೂ ವ್ಯಾಪಾರಿಗಳಿ ವಾಪಸ್ ತೆರಳುವಂತೆ ಸೂಚಿಸಿದರು. ಆದ್ರೆ ಯಾರ ಮಾತು ಕೇಳದ ಜನ ತಮ್ಮ ಪಾಡಿಗೆ ತಾವು ವ್ಯಾಪಾರ ಮಾಡುತ್ತಿದ್ದರು. ಪರಿಣಾಮ ತಹಶೀಲ್ದಾರ ಗಿರೀಶ್ ತಾವೇ ಲಾಠಿ ಹಿಡಿದು ಜನರನ್ನು ಹಾಗೂ ವ್ಯಾಪಾರಿಗಳನ್ನು ಚದುರಿಸುವ ಯತ್ನ ಮಾಡಿದರು. ಈ ಕುರಿತು ಶಿವಮೊಗ್ಗ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.