ಜನರ ಮನೆ ಬಾಗಿಲಿಗೆ ಅಂಗಡಿ.. ಶಿವಮೊಗ್ಗ ಜಿಲ್ಲಾಡಳಿತದ ಹೊಸ ಐಡಿಯಾ!! - shivamogga hopscom new plane to provide vegetable
ಕೊರೊನಾ ಮಹಾಮಾರಿಗೆ ದೇಶವೇ ಲಾಕ್‌ಡೌನ್ ಆಗಿದೆ. ಜನ ಜೀವನಾವಶ್ಯಕ ವಸ್ತುಗಳಾದ ತರಕಾರಿ, ಹಣ್ಣುಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಶಿವಮೊಗ್ಗ ಜಿಲ್ಲಾಡಳಿತ ಜಿಲ್ಲಾ ಹಾಪ್‌ಕಾಮ್ಸ್ ಮೂಲಕ ಮಾಡುತ್ತಿದೆ. ನಗರದ 35 ವಾರ್ಡ್ಗಳಿಗೆ ತಾಜಾ ಹಣ್ಣು ಹಾಗೂ ತರಕಾರಿ ಗಾಡಿಗಳನ್ನು ಕಳುಹಿಸಲಾಗುತ್ತಿದೆ. ಜನರು ತಮ್ಮ ಮನೆ ಬಾಗಿಲಿಗೆ ಬಂದಾಗ ಖರೀದಿ ಮಾಡಬಹುದಾಗಿದೆ. ಇದರಿಂದ ಜನ ಮನೆಯಿಂದ ಹೊರ ಬಂದು ಕೊರೊನಾಕ್ಕೆ ತುತ್ತಾಗುವ ಅವಶ್ಯಕತೆ ಇರಲ್ಲ. ಸದ್ಯ ಜಿಲ್ಲಾಡಳಿತದ ಪ್ಲಾನ್ಗೆ ಜನ ಖುಷಿಯಾಗಿದ್ದಾರೆ.