ಬೆಳಕಿನ ಹಬ್ಬದ ವಿಶೇಷ: ಶಿಕಾರಿಪುರದಲ್ಲಿ ಹೋರಿ ಬೆದರಿಸುವ ಸಂಪ್ರದಾಯ - ಹೋರಿ ಬೆದರಿಸುವ ಸಂಪ್ರದಾಯ
ಶಿವಮೊಗ್ಗ: ಜಿಲ್ಲೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಯಂದು ಹೋರಿ ಬೆದರಿಸುವ ಸ್ಪರ್ಧೆ ರೂಢಿಯಲ್ಲಿದೆ. ಹಳ್ಳಿಗಳಲ್ಲಿ ಶೃಂಗರಿಸಿದ ಹೋರಿಗಳನ್ನು ಮೆರವಣಿಗೆ ಮಾಡಲಾಗುತ್ತದೆ. ಅಂತೆಯೇ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಿಹಳ್ಳಿತಾಂಡದಲ್ಲಿ ಹೋರಿ ಬೆದರಿಸುವ ಮೂಲಕ ಹಬ್ಬವನ್ನ ಆಚರಿಸಲಾಯಿತು. ಹೋರಿಗಳ ಕೊರಳಿಗೆ ಕೊಬ್ಬರಿ, ಬಲೂನ್ ಕಟ್ಟಿ ಶೃಂಗರಿಸಿದ್ದ ಹೋರಿಗಳನ್ನು ಹಿಡಿಯಲು ಸಾವಿರಾರು ಯುವಕರು ನೆರೆದಿದ್ದರು.