ಬಿಜೆಪಿ ಕಾರ್ಪೋರೇಟರ್ಗಳ ಭರ್ಜರಿ ಸ್ಟೆಪ್ ವಿಡಿಯೋ ವೈರಲ್ - ಶಿವಮೊಗ್ಗ ಬಿಜೆಪಿ ಕಾರ್ಪೋರೇಟರ್ಗಳು
ಶಿವಮೊಗ್ಗ: ಮಹಾನಗರ ಪಾಲಿಕೆ ಬಿಜೆಪಿಯ ಕಾರ್ಪೋರೇಟರ್ಗಳು ಭರ್ಜರಿಯಾಗಿ ಸ್ಟೆಪ್ ಹಾಕಿದ ವಿಡಿಯೋ ಸಕತ್ ವೈರಲ್ ಆಗಿದೆ. ಶಿವಮೊಗ್ಗ ಹೊರ ವಲಯದ ಸೋಷಿಯಲ್ ಕ್ಲಬ್ನಲ್ಲಿ ನಡೆದ ಬಾಡೂಟದ ಪಾರ್ಟಿಯಲ್ಲಿ ಬಿಜೆಪಿ ಕಾರ್ಪೋರೇಟರ್ಗಳು ಸ್ಟೆಪ್ ಹಾಕಿದ್ದಾರೆ. ಇವರ ಜೊತೆಗೆ ಮಹಿಳಾ ಕಾರ್ಪೋರೇಟರ್ಗಳ ಪತಿರಾಯರು ಸಹ ಹಲವು ಕನ್ನಡದ ಹಾಡುಗಳಿಗೆ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದಾರೆ. ಇದರಲ್ಲಿ ಬಿಜೆಪಿ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಜ್ಞಾನೇಶ್ವರ್, ಶಂಕರ್ ಘನ್ನಿ, ಪ್ರಭಾಕರ್ ಪಾಲ್ಗೊಂಡಿದ್ದಾರೆ.