ಶಿವಾಜಿನಗರದ ಬಸ್ ನಿಲ್ದಾಣ ಖಾಲಿ ಖಾಲಿ: ಪ್ರಯಾಣಿಕರೂ ಇಲ್ಲ, ಬಸ್‌ಗಳೂ ಇಲ್ಲ - ಶಿವಾಜಿನಗರದ ಬಸ್ಸು ನಿಲ್ದಾಣ ಖಾಲಿ ಖಾಲಿ
ಬೆಂಗಳೂರು: ಸಾರಿಗೆ ನೌಕರರ ಮುಷ್ಕರದಿಂದಾಗಿ ಬೆಂಗಳೂರಿನ ಶಿವಾಜಿನಗರ ಬಸ್ಸು ನಿಲ್ದಾಣ ಯಾವುದೇ ಬಸ್ಗಳ ಸಂಚಾರವಿಲ್ಲದೆ ಖಾಲಿ ಖಾಲಿಯಾಗಿ ಕಾಣುತ್ತಿದೆ. ಪ್ರತಿದಿನ ಇಲ್ಲಿ ನೂರಾರು ಸಂಖ್ಯೆಯಲ್ಲಿ ಬಸ್ ಸಂಚಾರ ನಡೆಯುತ್ತಿತ್ತು. ಆದರೆ ಮುಷ್ಕರ ಹಿನ್ನೆಲೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು ರಸ್ತೆಗಳೆಲ್ಲ ಬಿಕೋ ಎನ್ನುತ್ತಿವೆ. ಇತ್ತ ನಿಲ್ದಾಣಕ್ಕೆ ಬರೋ ಪ್ರಯಾಣಿಕರಿಗೆ ಬಸ್ ಇಲ್ಲ ಎಂದು ಹೇಳಿ ಪೊಲೀಸರು ವಾಪಸ್ ಕಳುಹಿಸುತ್ತಿರುವುದು ಸಾಮಾನ್ಯವಾಗಿದೆ. ಈ ಕುರಿತು ಮತ್ತಷ್ಟು ಮಾಹಿತಿಯನ್ನು ನಮ್ಮ ಪ್ರತಿನಿಧಿ ದೀಪಾ ನೀಡಿದ್ದಾರೆ.