ಸಿಎಎ, ಎನ್ಆರ್ಸಿಗೆ ವಿರೋಧ: ಶಿವಾಜಿನಗರ ಬಂದ್ ಮಾಡಿ ಪ್ರತಿಭಟನೆ - banglore protest news
ಬೆಂಗಳೂರು: ಸಿಎಎ, ಎನ್ಆರ್ಸಿ ಕಿಚ್ಚು ಮತ್ತೆ ಸಿಲಿಕಾನ್ ಸಿಟಿಯಲ್ಲಿ ಕಂಡು ಬಂದಿದೆ. ಈ ಕಾಯ್ದೆಗಳನ್ನು ವಿರೋಧಿಸಿ ಇಡೀ ಕಂಟೋನ್ಮೆಂಟ್, ಶಿವಾಜಿನಗರ ಬಂದ್ ಮಾಡಲಾಗಿದ್ದು, ಫುಟ್ಪಾತ್ ವ್ಯಾಪಾರ, ಹೋಟೆಲ್, ಮಿನಿ ಮಾರ್ಕೆಟ್, ಮಾಂಸದ ಅಂಗಡಿ, ರಸೆಲ್ ಮಾರುಕಟ್ಟೆ , ಬೀಫ್ ಮಾರ್ಕೆಟ್, ನಾಲಾ ವೆಜಿಟೇಬಲ್ ಮಾರ್ಕೆಟ್, ಗುಜರಿ ಮಾರ್ಕೆಟ್, ಬಂಡಿ ಮೋಟ್ ಮಾರ್ಕೆಟ್,ಸ್ಟಿಫನ್ ಸ್ಕೋರ್ ಮಾರ್ಕೆಟ್ ಹಾಗೂ ಸೆಂಟ್ರಲ್ ಸ್ಟ್ರೀಟ್ ಮಾರ್ಕೆಟ್ ಸೇರಿದಂತೆ ಇಡೀ ಕಂಟೋನ್ಮೆಂಟ್ ಸಂಪೂರ್ಣ ಬಂದ್ ಮಾಡಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದರು.