ಕೊರೊನಾ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ನೀಡಿದ ಶಿಮುಲ್ ಒಕ್ಕೂಟ - ಶಿಮುಲ್ ಹಾಲು ಒಕ್ಕೂಟ
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶಿಮುಲ್ನ ಅಧ್ಯಕ್ಷ ಡಿ.ಆನಂದ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ 1 ಕೋಟಿ ರೂಪಾಯಿ ಚೆಕ್ ಹಸ್ತಾಂತರಿಸಿದರು. ಈ ವೇಳೆ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೇರಿದಂತೆ ಶಿಮುಲ್ನ ಮೂರು ಜಿಲ್ಲೆಯ ನಿರ್ದೇಶಕರು ಹಾಗೂ ಶಿಮುಲ್ ಎಂ.ಡಿ ಡಾ.ಬಸವರಾಜ ಹಾಜರಿದ್ದರು.