ಲಾಕ್ಡೌನ್ ಉಲ್ಲಂಘಿಸಿ ಓಡಾಡುತ್ತಿದ್ದವರಿಗೆ ರಾಷ್ಟ್ರಗೀತೆ ಹೇಳಿಸಿದ ಸಬ್ಇನ್ಸ್ಪೆಕ್ಟರ್ - violate the lockdown says national anthem
ಶಿವಮೊಗ್ಗ: ಸಂಡೇ ಲಾಕ್ಡೌನ್ ಘೋಷಣೆ ಮಾಡಿದ್ರೂ ಜನ ಮಾತ್ರ ಅನಗತ್ಯ ಓಡಾಡುತ್ತಿದ್ದಾರೆ. ಹಾಗಾಗಿ ನಗರದ ತುಂಗಾ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ತಿರುಮಲೇಶ್ ಅವರು ಲಾಕ್ಡೌನ್ ಉಲ್ಲಂಘಿಸಿ ಅನಗತ್ಯ ಓಡಾಡುತ್ತಿದ್ದವರ ಕೈಯಲ್ಲಿ ರಾಷ್ಟ್ರಗೀತೆ ಹಾಡಿಸಿ ಜಾಗೃತಿ ಮೂಡಿಸಿದ್ದಾರೆ. ನಿಮ್ಮ ಒಳ್ಳೆಯದಕ್ಕೆ ಲಾಕ್ಡೌನ್ ಮಾಡಲಾಗಿದೆ. ನಾವೆಲ್ಲರೂ ಸರ್ಕಾರದ ನಿಯಮಗಳನ್ನು ಪಾಲಿಸುವ ಮೂಲಕ ಕೊರೊನಾ ವೈರಸ್ ಓಡಿಸಬೇಕು. ಹಾಗಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡುವುದರ ಜೊತೆಗೆ ಅನಗತ್ಯ ಓಡಾಡಬಾರದು ಎಂದು ಬುದ್ಧಿ ಮಾತು ಹೇಳಿದ್ದಾರೆ.