ಐದು ದಶಕಗಳಿಂದ ಕನ್ನಡ ಸೇವೆಯಲ್ಲಿ ತೊಡಗಿದೆ ಶಿವಮೊಗ್ಗದ ದುರ್ಗಿಗುಡಿ ಕನ್ನಡ ಸಂಘ - Shimoga Durgigudi Kannad Sanga
ಶಿವಮೊಗ್ಗ: ಕನ್ನಡವನ್ನು ಉಳಿಸುವ, ಬೆಳೆಸುವ ಉದ್ದೇಶದಿಂದ ಸ್ಥಾಪನೆಯಾದ ಶಿವಮೊಗ್ಗದ ದುರ್ಗಿಗುಡಿ ಕನ್ನಡ ಸಂಘ ಕಳೆದ 50 ವರ್ಷಗಳಿಂದ ಕನ್ನಡ ಸೇವೆಯನ್ನು ಮಾಡಿಕೊಂಡು ಬಂದಿದೆ. 1969ರಲ್ಲಿ ಪ್ರಾರಂಭವಾದ ಕನ್ನಡ ಸಂಘ ಇದೀಗ 51 ವರ್ಷ ಪೂರೈಸಿದೆ. ದುರ್ಗಿಗುಡಿ ಕನ್ನಡ ಸಂಘ ಪ್ರಾರಂಭವಾದಗಿನಿಂದಲೂ ಇದುವರೆಗೂ ಒಂದು ವರ್ಷವೂ ನಿಲ್ಲಿಸದೇ ರಾಜ್ಯೋತ್ಸವ ಆಚರಿಸಿಕೊಂಡು ಬಂದಿರುವುದು ಸಂಘದ ಹೆಗ್ಗಳಿಕೆ.