ಗಣತಂತ್ರ ವಿಶೇಷ.. ಮಹಿಳಾ ಬೈಕ್ ರ್ಯಾಲಿಗೆ ಸಚಿವ ಎಂಟಿಬಿ ನಾಗರಾಜ್ ಚಾಲನೆ.. - ಶಿ ಫಾರ್ ಸೊಸೈಟಿ
ಹೊಸಕೋಟೆ : ಮಹಿಳಾ ಬೈಕರ್‌ಗಳನ್ನೇ ಹೊಂದಿರುವ 'ಶಿ ಫಾರ್ ಸೊಸೈಟಿ' ಎಂಬ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯು ಗಣರಾಜ್ಯೋತ್ಸವ ಪ್ರಯುಕ್ತ ಇಂದು ಹೊಸಕೋಟೆಯಿಂದ ಕೋಲಾರವರೆಗೆ ಮಹಿಳಾ ಬೈಕ್ ರ್ಯಾಲಿ ಆಯೋಜಿಸಿತ್ತು. ರ್ಯಾಲಿಗೆ ಪೌರಾಡಳಿತ ಮತ್ತು ಸಕ್ಕರೆ ಖಾತೆ ಸಚಿವ ಎಂಟಿಬಿ ನಾಗರಾಜ್ ಅವರು ಚಾಲನೆ ನೀಡಿದರು. ಒಟ್ಟು 300 ಬೈಕ್‌ಗಳಲ್ಲಿ 100 ಮಹಿಳಾ ಬೈಕರ್‌ಗಳು, 200 ಪುರುಷರು ಪಾಲ್ಗೊಂಡಿದ್ದರು. ಎಲ್ಲರೂ ಸೇನಾ ಟಿ ಶರ್ಟ್ ಹಾಕಿಕೊಂಡು ಸೇನಾ ಸ್ಫೂರ್ತಿ ಮೆರೆದರು. ಜತೆಗೆ 30 ಅಡಿ ಉದ್ದದ ರಾಷ್ಟ್ರಧ್ವಜವನ್ನು ಪ್ರದರ್ಶಿಸುವ ಮೂಲಕ ರಾಷ್ಟ್ರಪ್ರೇಮ ಮೂಡಿಸಿದರು.