ವಿಜ್ಞಾನ ವಿಭಾಗದಲ್ಲಿ ಕಾಲೇಜಿಗೆ ಟಾಪರ್... ಐಎಎಸ್ ಆಗುವ ಕನಸು ಹೊತ್ತ ಶಮಿತಾ ಕುಮಾರಿ - undefined
ಮಂಗಳೂರು: ಇಂದು ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ದ.ಕ ಜಿಲ್ಲೆಯ ಮಂಗಳೂರಿನ ಶಾರದಾ ಪಿ.ಯು ಕಾಲೇಜು ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಎಸ್. ಶಮಿತಾ ಕುಮಾರಿ 591 ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಮುಂದೆ ಐಎಎಸ್ ಮಾಡಬೇಕೆಂದು ಕನಸು ಕಾಣುತ್ತಿರುವ ಶಮಿತಾ ಭೌತಶಾಸ್ತ್ರ, ಎಲೆಕ್ಟ್ರಾನಿಕ್ಸ್, ಸಂಸ್ಕೃತದಲ್ಲಿ ತಲಾ 100 ಅಂಕ ಗಳಿಸಿದ್ದಾರೆ. ಗಣಿತ ಹಾಗೂ ರಸಾಯನ ಶಾಸ್ತ್ರದಲ್ಲಿ ತಲಾ 99 ಅಂಕ ಗಳಿಸಿದ್ದಾರೆ. ಇಂಗ್ಲಿಷ್ ನಲ್ಲಿ 93 ಅಂಕ ಗಳಿಸಿದ್ದಾರೆ.