ಬಳ್ಳಾರಿಯಲ್ಲಿ ಸಂತ ಸೇವಾಲಾಲ್ 281ನೇ ಜಯಂತಿ: ಕುಣಿದು ಕುಪ್ಪಳಿಸಿದ ಲಂಬಾಣಿಗಳು.. - ಬಳ್ಳಾರಿಯಲ್ಲಿ ಸೇವಾಲಾಲ್ 281ನೇ ಜಯಂತಿ
ಬಳ್ಳಾರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೇತೃತ್ವದಲ್ಲಿ ಇಂದು 281ನೇ ಸಂತ ಸೇವಾಲಾಲ್ ಜಯಂತಿ ಮೆರವಣಿಗೆ ಕಾರ್ಯಕ್ರಮ ನಡೆಯಿತು. ಸೇವಾಲಾಲ್ ಅವರ 281ನೇ ಜಯಂತಿ ಪ್ರಯುಕ್ತ ಗಣಿನಾಡು ಬಳ್ಳಾರಿ ನಗರದ ಮುನಿಸಿಪಲ್ ಮೈದಾನದಿಂದ ರಾಯಲ್ ವೃತ್ತ, ಬೆಂಗಳೂರು ರಸ್ತೆ, ಜೈನ್ ಮಾರ್ಕೆಟ್, ಬ್ರೂಸ್‌ಪೇಟೆದಿಂದ ಮೋತಿ ಮಾರ್ಗವಾಗಿ ಡಾ. ಜೋಳದರಾಶಿ ದೊಡ್ಡನಗೌಡರ ರಂಗಮಂದಿರದತ್ತ ಸೇರಿತು. ದಾರಿಯುದ್ದಕ್ಕೂ ತಮಟೆ ವಾದನ ಮತ್ತು ಡೊಳ್ಳು ಕುಣಿತ ಜೊತೆಗೆ ಲಂಬಾಣಿ ಸಮುದಾಯದ ಯುವಕ-ಯುವತಿಯರು, ಮಹಿಳೆಯರು, ವಯಸ್ಕರರು ಲಂಬಾಣಿ ಜಾನಪದ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು.