ಫ್ಲೈಓವರ್ ಮೇಲೆ ಸರಣಿ ಅಪಘಾತ.. ಸಿಲಿಕಾನ್ ಸಿಟಿ ಜನರಿಗೆ ಬೆಳ್ಳಂಬೆಳಿಗ್ಗೆ ಟ್ರಾಫಿಕ್ ತಲೆಬಿಸಿ - ವಿಡಿಯೋ - ಬೆಂಗಳೂರಿನಲ್ಲಿ ಫ್ಲೈ ಓವರ್ ಮೇಲೆ ಸರಣಿ ಅಪಘಾತ ಸುದ್ದಿ
ಬೆಂಗಳೂರು : ತುಮಕೂರು ರಸ್ತೆಯ ಫ್ಲೈ ಓವರ್ ಮೇಲೆ ಸರಣಿ ಅಪಘಾತವಾದ ಹಿನ್ನೆಲೆ ಬೆಳ್ಳಂಬೆಳಗ್ಗೆ ಸಿಲಿಕಾನ್ ಸಿಟಿ ಜನರಿಗೆ ಟ್ರಾಫಿಕ್ ಬಿಸಿ ತಟ್ಟಿದೆ. ಪರಿಣಾಮ ಫ್ಲೈ ಓವರ್ ಮೇಲೆ ಕಿಲೋಮೀಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಗೊರಗುಂಟೆಪಾಳ್ಯ ಬಳಿಯ ಫ್ಲೈಓವರ್ನಲ್ಲಿ ಟ್ರಾಫಿಕ್ ನಾಲ್ಕು ಕಾರುಗಳ ನಡುವೆ ಸಣ್ಣ ಪ್ರಮಾಣದ ಡಿಕ್ಕಿ ಸಂಭವಿಸಿದೆ. ಈ ಹಿನ್ನೆಲೆ ಜಾಮ್ ಉಂಟಾಗಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸದ್ಯ ಪೀಣ್ಯಾ ಸಂಚಾರಿ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.