ಕರ್ನಾಟಕ

karnataka

ETV Bharat / videos

ಮೂರು ಮನೆಗಳಿಗೆ ನುಗ್ಗಿ ನಗದು-ಚಿನ್ನಾಭರಣ ದೋಚಿ ಕಳ್ಳರು ಪರಾರಿ - ಮನೆ ಬೀಗ ಮುರಿದು ಚಿನ್ನಾಭರಣ ಕಳ್ಳತನ

By

Published : Mar 6, 2020, 3:47 PM IST

ಕಲಬುರಗಿ: ತಡರಾತ್ರಿ ಮನೆಗಳ ಸರಣಿ ಕಳ್ಳತನ ನಡೆದಿರುವ ಘಟನೆ ನಗರದ ನ್ಯೂ ರಾಘವೇಂದ್ರ ಕಾಲೋನಿಯಲ್ಲಿ ಜರುಗಿದೆ. ಬೇಸಿಗೆ ಹಿನ್ನೆಲೆ ಮನೆಯವರು ಛಾವಣಿ ಮೇಲೆ ಮಲಗಿದ್ದ ವೇಳೆ ಮೂರು ಮನೆಗಳಿಗೆ ನುಗ್ಗಿ ಕಳ್ಳತನ ಮಾಡಲಾಗಿದೆ. ಮನೆ ಬೀಗ ಮುರಿದು ಒಳ ನುಗ್ಗಿ ಚಿನ್ನಾಭರಣ ಹಾಗೂ 5 ಸಾವಿರ ರೂ. ನಗದು ದೋಚಿ ಖದೀಮರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಎನ್​ಆರ್ ಕಾಲೋನಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details