ಸಿಂದಗಿಯಲ್ಲಿ ಸರಣಿ ಕಳ್ಳತನ: ಕೃತ್ಯ ಸಿಸಿಟಿವಿಯಲ್ಲಿ ಸೆರೆ - ಸಿಂದಗಿಯಲ್ಲಿ ಸರಣಿ ಕಳ್ಳತನ
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಸರಣಿ ಕಳ್ಳತನ ನಡೆದಿದೆ. ಕಳ್ಳತನ ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ಪಟ್ಟಣದ ಸಂಗೀತಾ ಮೊಬೈಲ್ ಶೋ ರೂಂ ನಲ್ಲಿ ಕಳ್ಳತನವಾಗಿದು, ಲಕ್ಷಾಂತರ ರೂ. ಮೌಲ್ಯದ ಮೊಬೈಲ್ಗಳನ್ನು ದೋಚಲಾಗಿದೆ. ನಂತರ ಸಿದ್ದೇಶ್ವರ ಸೂಪರ್ ಬಜಾರ್, ಪೂಜಾರಿ ಟೈರ್ ರಿಕೊಡಿಂಗ್ ಶಾಪ್ ಹಾಗೂ ಸ್ಪೂರ್ತಿ ವೈನ್ ಶಾಪ್ ನಲ್ಲಿ ಸಹ ಕಳ್ಳತವಾಗಿದೆ. ತಡರಾತ್ರಿ ಅಂಗಡಿಗಳ ಬೀಗ ಒಡೆದು ಒಳ ನುಗ್ಗಿದ ಕಳ್ಳರು ಕೃತ್ಯ ಎಸೆಗಿದ್ದಾರೆ. ಕಳ್ಳತನವಾದ ಅಂಗಡಿಗಳಿಗೆ ಭೇಟಿ ನೀಡಿರುವ ಪೊಲೀಸರು ಮೊಬೈಲ್ ಸೇರಿ ಮತ್ತೆ ಏನೇನು ವಸ್ತುಗಳು ಕಳ್ಳತನವಾಗಿದೆ ಎಂಬುವುದರ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.