ಸಂಶೋಧಕರ ಸಂಶೋಧಕ ಚಿಮೂ ಇನ್ನಿಲ್ಲ; ಅಗಲಿದ ಹಿರಿಯ ಚೇತನಕ್ಕೆ ಗಣ್ಯರ ಸಂತಾಪ - ನಾಡಿನ ಹಿರಿಯ ಸಾಹಿತಿ
'ಸಂಶೋಧಕರ ಸಂಶೋಧಕ' ಎಂಬ ಹಿರಿಮೆಯ ಸಾಹಿತಿ ಡಾ.ಎಂ. ಚಿದಾನಂದ ಮೂರ್ತಿ ಇನ್ನಿಲ್ಲ. ನಾಡಿನ ಹಿರಿಯ ಸಾಹಿತಿ, ಇತಿಹಾಸ ತಜ್ಞ, ಹೋರಾಟಗಾರ, ಕನ್ನಡದ ಗರುಡ ಎಂದೆಲ್ಲಾ ಸುಪ್ರಸಿದ್ಧಿ ಪಡೆದಿದ್ದ ಚಿಮು ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ತಮ್ಮ 89 ವರ್ಷದ ಹಿರಿಯ ಚೇತನದ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ.