ಸಾರಿಗೆ ನೌಕರರ ಮುಷ್ಕರ ಮಸಣದಲ್ಲಿ ಮದ್ವೆ ಮಾಡಿದಂಗೆ: ಸಿದ್ದಾರೆಡ್ಡಿ - ಬಳ್ಳಾರಿ
ರಾಜ್ಯ ವ್ಯಾಪಿ ಕರೆ ನೀಡಿದ್ದ ಸಾರಿಗೆ ನೌಕರರ ಮುಷ್ಕರ ಮಸಣದಲ್ಲಿ ಮದ್ವೆ ಮಾಡಿದಂಗ ಇದೆ ಎಂದು ಹಿರಿಯ ರೈತ ಮುಖಂಡ ಸಿದ್ದಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ. ಬಳ್ಳಾರಿಯ ಡಿಸಿ ಕಚೇರಿಯಲ್ಲಿ ಇಂದು ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾ ಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಅವರಿಗೂ ಸಾರಿಗೆ ನೌಕರರಿಗೂ ಏನ್ ಸಂಬಂಧ? ಇದು ಕೋವಿಡ್ ಸಂದರ್ಭ. ಈ ಸಂದರ್ಭದಲ್ಲಿ ಸಾರಿಗೆ ನೌಕರರು ಮುಷ್ಕರಕ್ಕೆ ಇಳಿದಿರೋದು ತರವಲ್ಲ. ಕೋಡಿಹಳ್ಳಿಗೆ ನಿಜವಾಗ್ಲೂ ಸಾರಿಗೆ ನೌಕರರ ಬಗ್ಗೆ ಕಾಳಜಿ ಇದ್ದರೆ ಖಾಕಿ ಬಟ್ಟೆ ಧರಿಸಿ ಮುಷ್ಕರಕ್ಕೆ ಇಳಿಯಲಿ ಎಂದು ಸವಾಲು ಹಾಕಿದರು.