ಕರ್ನಾಟಕ

karnataka

ETV Bharat / videos

ಬೆಂಗಳೂರಲ್ಲಿರುವ ಜನರನ್ನು ಅವರವರ ಊರಿಗೆ ಕಳುಹಿಸಿಕೊಡಿ: ಶಾಸಕರ ಮನವಿ - ಬೆಂಗಳೂರಲ್ಲಿರುವ ಜನರನ್ನು ಅವರವರ ಊರಿಗೆ ಕಳುಹಿಸಿಕೊಡಿ

By

Published : Mar 30, 2020, 9:31 PM IST

ಚಿಕ್ಕಮಗಳೂರು: ದಯವಿಟ್ಟು ಬೆಂಗಳೂರಲ್ಲಿರುವ ಜನರನ್ನು ಅವರವರ ಊರಿಗೆ ಕಳುಹಿಸಿಕೊಡಿ ಎಂದು ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡ್ಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ. ಅಮಾಯಕರ ಮೇಲೆ ಪೊಲೀಸರ ದೌರ್ಜನ್ಯ ಹೆಚ್ಚಾಗಿದೆ. ಇದೀಗ ಅವರೆಲ್ಲರೂ ಕೆಲಸವಿಲ್ಲದೇ ಸಂಕಷ್ಟದಲ್ಲಿದ್ದಾರೆ. ಅವರ ಬದುಕು ಬೀದಿಗೆ ಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಉತ್ತರ ಪ್ರದೇಶ, ದೆಹಲಿ ಸರ್ಕಾರಗಳು ಕೈಗೊಂಡ ರೀತಿಯಲ್ಲೇ ನಡೆದುಕೊಳ್ಳಿ. ಊರಿಗೆ ಕಳುಹಿಸಿಕೊಟ್ಟು, ಎಲ್ಲ ರೀತಿಯ ವೈದ್ಯಕೀಯ ಪರೀಕ್ಷೆ ಮಾಡಿಸಿ ಎಂದು ಒತ್ತಾಯಿಸಿದ್ದಾರೆ.

ABOUT THE AUTHOR

...view details