ಕೊಚ್ಚೆಯಲ್ಲೇ ವ್ಯಾಪಾರ ನಡೆಸುತ್ತಿರುವ ಕಲಾಸಿಪಾಳ್ಯ ಮಾರುಕಟ್ಟೆ ವ್ಯಾಪಾರಿಗಳು! - kalasipalya market latest news
ಕೊರೊನಾ ಹೆಚ್ಚಾದ ಬಳಿಕ ಸಿಂಗೇನ ಅಗ್ರಹಾರಕ್ಕೆ ಶಿಫ್ಟ್ ಮಾಡಿದ್ದ ಕಲಾಸಿಪಾಳ್ಯ ಮಾರುಕಟ್ಟೆಯು ಇಂದಿನಿಂದ ಕಲಾಸಿಪಾಳ್ಯದಲ್ಲೇ ಆರಂಭವಾಗಿದೆ. ಆದ್ರೆ ಮಳೆ ಬಂದ ಹಿನ್ನೆಲೆ ಕಲಾಸಿಪಾಳ್ಯ ಮಾರುಕಟ್ಟೆಯ ರಸ್ತೆಗಳು ಕೆಸರಿನ ಕೊಚ್ಚೆ ಆಗಿವೆ. ಹಲವಾರು ವರ್ಷಗಳಿಂದ ಈ ಸಮಸ್ಯೆ ಇದ್ದರೂ ಸ್ಥಳೀಯ ಆಡಳಿತ ಇತ್ತ ತಿರುಗಿಯೂ ನೋಡಿಲ್ಲ. ಕೋವಿಡ್ ಹಿನ್ನೆಲೆ ಮಾಸ್ಕ್, ಸ್ಯಾನಿಟೈಸರ್ ಬಳಕೆಗೆ ಒತ್ತಾಯಿಸುವ ಬಿಬಿಎಂಪಿ ಇಲ್ಲಿನ ಚರಂಡಿ ಸಮಸ್ಯೆ, ಕಸ ಸಮಸ್ಯೆ ಬಗೆಹರಿಸುವತ್ತ ಗಮನ ಹರಿಸಿಲ್ಲ ಎನ್ನಲಾಗಿದೆ. ಕಲಾಸಿಪಾಳ್ಯ ಮಾರುಕಟ್ಟೆಯ ಪರಿಸ್ಥಿತಿ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.