ಸೇಡಂ: ಶಾಸಕ ನಾರಾಯಣರಾವ್ಗೆ ಕೋಲಿ ಸಮಾಜದಿಂದ ಶ್ರದ್ಧಾಂಜಲಿ - ಬಸವಕಲ್ಯಾಣ ಶಾಸಕ ನಾರಾಯಣರಾವ್
ಕೊರೊನಾ ಮಹಾಮಾರಿಗೆ ಬಲಿಯಾದ ಬಸವಕಲ್ಯಾಣ ಶಾಸಕ ನಾರಾಯಣರಾವ್ ಅವರಿಗೆ ಕೋಲಿ ಸಮಾಜದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪಟ್ಟಣದ ಬಸ್ ನಿಲ್ದಾಣ ಬಳಿ ಕೋಲಿ ಸಮಾಜದ ಮಾಜಿ ಅಧ್ಯಕ್ಷ ಭೀಮರಾವ್ ಅಳ್ಳೊಳ್ಳಿ ನೇತೃತ್ವದಲ್ಲಿ ಒಂದು ನಿಮಿಷ ಕಾಲ ಮೌನಾಚರಣೆ ಆಚರಿಸಿ, ನಾರಾಯಣರಾವ್ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಲಾಯಿತು.