ಸಮಸ್ಯೆ ಆಲಿಸಲು ಬಂದ ತಹಶೀಲ್ದಾರ್ ಕಾಲಿಗೆ ಬಿದ್ದ ಭದ್ರತಾ ಸಿಬ್ಬಂದಿ! ಕಾರಣ? - gadag news
ಗದಗ ಜಿಲ್ಲೆಯ ಮುಂಡಗಿರಿ ತಾಲೂಕಿನ ಕಪ್ಪತಗುಡ್ಡದ ಸುಜಲಾನ್ ಕಂಪನಿ ಏಕಾಏಕಿ ಇಲ್ಲದ ನೆಪ ಹೇಳಿ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿರುವುದನ್ನು ಖಂಡಿಸಿ ಕಂಪನಿ ಭದ್ರತಾ ಸಿಬ್ಬಂದಿ ತಹಶೀಲ್ದಾರ್ ಕಾರ್ಯಾಲಯದ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ, ಸ್ಥಳಕ್ಕೆ ಸಮಸ್ಯೆ ಆಲಿಸಲು ಬಂದ ತಹಶೀಲ್ದಾರ್ ಯಲ್ಲಪ್ಪ ಗೋಣೆಪ್ಪ ಅವರ ಬಳಿ, ಸುಜಲಾನ್ ವಿಂಡ್ ಕಂಪನಿ ಭದ್ರತಾ ಸಿಬ್ಬಂದಿಯಾಗಿರುವ ಶಿವಪುತ್ರಪ್ಪ ತಮ್ಮ ಸಮಸ್ಯೆ ಪರಿಹಾರಕ್ಕಾಗಿ ಕಾಲಿಗೆ ಬಿದ್ದು ಅಂಗಲಾಚಿ ಬೇಡಿಕೊಂಡ ಘಟನೆ ನಡೆಯಿತು. ಭದ್ರತಾ ಸಿಬ್ಬಂದಿ ಕೆಲಸ ನೆಚ್ಚಿಕೊಂಡು ಜೀವನ ಮಾಡುತ್ತಿದ್ದ ಕುಟುಂಬಗಳು ಕಂಪನಿಯ ನಿರ್ಧಾರದಿಂದ ಇಂದು ಬೀದಿಗೆ ಬಂದಿವೆ. ಹೀಗಾಗಿ ನಮ್ಮ ಎಲ್ಲಾ ಕಷ್ಟಗಳನ್ನು ಪರಿ ಹರಿಸುವಂತೆ ತಹಶೀಲ್ದಾರಗೆ ಮನವಿ ಸಲ್ಲಿಸಿದರು.