ಕರ್ನಾಟಕ

karnataka

ETV Bharat / videos

ಶಿವಮೊಗ್ಗ:ನಾಳೆ ವರೆಗೂ ನಿಷೇಧಾಜ್ಞೆ ಜಾರಿ - ಸೆಕ್ಷನ್‌ 144 ಜಾರಿ

By

Published : Dec 4, 2020, 4:01 PM IST

ಶಿವಮೊಗ್ಗ: ಬಜರಂಗ ದಳದ ಕಾರ್ಯಕರ್ತನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ನಗರಾದ್ಯಂತ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ, ಸೆಕ್ಷನ್‌ 144 ಜಾರಿ ಮಾಡಲಾಗಿದೆ. ನಾಳೆಯವರೆಗೂ ಸಹ ನಿಷೇಧಾಜ್ಞೆ ಮುಂದುವರಿಸಲಾಗಿದ್ದು, ಎಂ.ಕೆ.ಕೆ ರಸ್ತೆ, ಕೆ.ಆರ್.ಪುರಂ, ಸಿದ್ದಯ್ಯ ರಸ್ತೆ, ರವಿವರ್ಮ ಬೀದಿ, ಆಜಾದ್ ನಗರ, ಬಿ.ಬಿ.ರಸ್ತೆ, ಅಶೋಕ ರಸ್ತೆ, ಗಾಂಧಿ ಬಜಾರ್ ಭಾಗದಲ್ಲಿ ಕರ್ಫ್ಯೂ ಮುಂದುವರೆದಿದೆ. ನಗರಕ್ಕೆ ಆಗಮಿಸುವ ಹಾಗೂ ಹೊರ ಹೋಗುವ ವಾಹನಗಳ ಮೇಲೆ ಪೊಲೀಸ್ ಇಲಾಖೆ ತೀವ್ರ ನಿಗಾ ವಹಿಸಿದ್ದು, ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿದೆ.

ABOUT THE AUTHOR

...view details