ಗಜಪಡೆ, ಅಶ್ವಪಡೆಗೆ ಎರಡನೇ ಬಾರಿಗೆ ಸಿಡಿಮದ್ದು ತಾಲೀಮು - Talim for Elephants
ಮೈಸೂರು: ಜಂಬೂಸವಾರಿ ಮೆರವಣಿಗೆ ಇನ್ನು 7 ದಿನಗಳಷ್ಟೆ ಬಾಕಿ ಇರುವುದರಿಂದ, ಗಜಪಡೆ, ಅಶ್ವಪಡೆಗೆ ಎರಡನೇ ಬಾರಿಗೆ ಕುಶಾಲತೋಪು ಸಿಡಿಮದ್ದು ತಾಲೀಮು ನೀಡಲಾಯಿತು. ಅರಮನೆ ಕೋಟೆ ಮಾರಮ್ಮನ ದೇವಸ್ಥಾನದ ಬಳಿ ಏಳು ಫಿರಂಗಿ ಗಾಡಿಗಳ ಮೂಲಕ ಕುಶಾಲತೋಪು ಸಿಡಿಸುವ ಮೂಲಕ ಆನೆಗಳು, ಕುದುರೆಗಳು ಬೆದರಂತೆ ನೋಡಿಕೊಳ್ಳುವ ಉದ್ದೇಶದಿಂದ ಶಬ್ಧದ ಪರಿಚಯ ಮಾಡಿಕೊಡಲಾಗುವುದು. ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆಯ 30 ಸಿಬ್ಬಂದಿಗಳಿಂದ ಕುಶಾಲತೋಪಿನ ಸಿಡಿಮದ್ದು ಸಿಡಿಸಿದರು. ಅರಮನೆಯ ವರಹಾ ಗೇಟ್ ನ ಒಳಭಾಗದ ಗೋಡೆ ಬಳಿಯೇ ಗಜಪಡೆ ನಿಂತರೆ, ಅಶ್ವಪಡೆಗಳು ತಾಲೀಮಿನ ಬಳಿಯ ನಿಂತವು. ವಿಜಯ ದಶಮಿಯಂದು ಜಂಬೂ ಸವಾರಿ ಹೊರಡುವ ಮುನ್ನ 21 ಸುತ್ತು ಕುಶಾಲತೋಪು ಸಿಡಿಸಲಾಗುತ್ತದೆ.