ಮಂಗಳೂರು ಪೊಲೀಸ್ ಹಲ್ಲೆ ಪ್ರಕರಣದಲ್ಲಿ ಎಸ್ಡಿಪಿಐ ಕೈವಾಡ: ನಳೀನ್ ಕುಮಾರ್ ಕಟೀಲ್ - ನಳೀನ್ ಕುಮಾರ್ ಕಟೀಲ್ ಹೇಳಿಕೆ
ಮಂಗಳೂರು: ನಗರದಲ್ಲಿ ಪೊಲೀಸ್ ಮೇಲೆ ಹಲ್ಲೆ ನಡೆಸಿರುವ ಪ್ರಕರಣದಲ್ಲಿ ಎಸ್ಡಿಪಿಐ ಕೈವಾಡವಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ. ದ.ಕ. ಜಿಲ್ಲೆಯಲ್ಲಿ ಹತ್ತಾರು ತಿಂಗಳಲ್ಲಿ ಎಸ್ಡಿಪಿಐ ರಾಷ್ಟ್ರ ವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವುದು ಬಹಿರಂಗಗೊಂಡಿದೆ. ಹಿಂದೆ ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ ಹತ್ಯೆಗಳಲ್ಲಿಯೂ ಎಸ್ಡಿಪಿಐ ಹೆಸರು ಕೇಳಿ ಬಂದಿತ್ತು. ಇತ್ತೀಚೆಗೆ ಗ್ರಾಪಂ ಚುನಾವಣಾ ಸಂದರ್ಭ ಪಾಕ್ ಪರ ಘೋಷಣೆ ಮಾಡಿತ್ತು. 'ಮಾಯಾ ಗ್ಯಾಂಗ್' ಮತ್ತು 'ಕಾರ್ಖಾನ ಗ್ಯಾಂಗ್' ಮುಂತಾದ ಗ್ಯಾಂಗ್ ಗಳನ್ನು ಕಟ್ಟಿಕೊಂಡು ಇಂತಹ ಕೃತ್ಯಗಳಲ್ಲಿ ತೊಡಗಿರೋದು ಬಯಲಾಗಿದೆ. ಈ ಬಗ್ಗೆ ಪೂರ್ಣ ತನಿಖೆಯಾಗಿ ರಾಷ್ಟ್ರ ವಿರೋಧಿ ಕೃತ್ಯಗಳಿದ್ದಲ್ಲಿ ಎಸ್ಡಿಪಿಐನ್ನು ನಿಷೇಧಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ. ಪ್ರಕರಣವನ್ನು ಬೇಧಿಸಿದ ಪೊಲೀಸ್ ಇಲಾಖೆಯನ್ನು ಅಭಿನಂದಿಸುತ್ತೇನೆ ಎಂದು ಕಟೀಲು ಹೇಳಿದರು.
Last Updated : Jan 31, 2021, 4:54 AM IST