ಮಂಡ್ಯ: ಖುಷಿ-ಖುಷಿಯಾಗಿ ಶಾಲೆಗಳಿಗೆ ಆಗಮಿಸಿದ ಚಿಣ್ಣರು - ಮಂಡ್ಯ
ಮಂಡ್ಯ:ರಾಜ್ಯಾದ್ಯಂತ ಇಂದಿನಿಂದ 1ರಿಂದ 5ನೇ ತರಗತಿಯ ಶಾಲೆಗಳು ಆರಂಭವಾಗಿದ್ದು, ಮಕ್ಕಳು ಖುಷಿ - ಖುಷಿಯಿಂದ ಆಗಮಿಸಿದರು. ಲಾಕ್ ಡೌನ್ ಬಳಿಕ ಶಾಲೆ ಆರಂಭವಾಗಿದ್ದು, ಶಿಕ್ಷಕರು ಶಾಲೆಗೆ ಹಸಿರು ತೋರಣ ಕಟ್ಟಿ ಮಕ್ಕಳನ್ನು ಬರ ಮಾಡಿಕೊಂಡರು. ತರಗತಿ ಆರಂಭದ ಹಿನ್ನೆಲೆ ಪೋಷಕರ ಮೊಗದಲ್ಲಿಯೂ ಸಂತಸ ಮೂಡಿದೆ. ಶಾಲೆ ಆರಂಭವಾಗುತ್ತಿದ್ದಂತೆ ಕೊರೊನಾ ಮಾರ್ಗಸೂಚಿ ಪಾಲನೆ ಮಾಡಲು ಹೆಚ್ಚಿನ ಸಿಬ್ಬಂದಿ ನೇಮಕ ಮಾಡಲಾಗಿದೆ. ಮಾಸ್ಕ್ , ಸ್ಯಾನಿಟೈಸರ್, ಬಿಸಿ ನೀರಿನ ವ್ಯವಸ್ಥೆಯನ್ನು ಶಾಲಾ ಮುಖ್ಯಸ್ಥರು ಮಾಡಿಕೊಂಡಿದ್ದಾರೆ.