ಸೂಕ್ತ ಕ್ರಮಗಳೊಂದಿಗೆ ಶಾಲಾ-ಕಾಲೇಜುಗಳು ಪುನಾರಂಭ.. ಕಲಬುರ್ಗಿಯಲ್ಲಿ ಮಕ್ಕಳು ಖುಷಿಖುಷಿ! - School colleges started in kalburgi
ಕಲಬುರಗಿ : ಜಿಲ್ಲೆಯಲ್ಲಿರುವ 2,830 ಶಾಲೆ, 280ಕ್ಕೂ ಹೆಚ್ಚು ಪಿಯು ಕಾಲೇಜುಗಳು ಮತ್ತೆ ಇಂದಿನಿಂದ ಪ್ರಾರಂಭವಾಗಿವೆ. 1ರಿಂದ 10ನೇ ತರಗತಿವರೆಗೆ 5.38 ಲಕ್ಷ ವಿದ್ಯಾರ್ಥಿಗಳಿದ್ದು, ಸದ್ಯ 6 ರಿಂದ 10 ನೇ ತರಗತಿಗಳ ಜೊತೆಗೆ ದ್ವಿತೀಯ ಪಿಯುಸಿ ತರಗತಿಗಳು ಮಾತ್ರ ಆರಂಭವಾಗಿವೆ. ಸರ್ಕಾರ ಸೂಚಿಸಿರುವ ಕೋವಿಡ್ ಮಾರ್ಗಸೂಚಿಗಳ ಅನ್ವಯ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಶಾಲೆ ಮತ್ತು ಕಾಲೇಜುಗಳು ಪ್ರಾರಂಭವಾಗಿದ್ದು, ಎಲ್ಲಾ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಾಲೆಗಳ ಪ್ರವೇಶ ದ್ವಾರದಲ್ಲೇ ಸ್ಕ್ರೀನಿಂಗ್ ಪರೀಕ್ಷೆ, ಸ್ಯಾನಿಟೈಸ್ ಮಾಡಿ ವಿದ್ಯಾರ್ಥಿಗಳನ್ನು ಬರಮಾಡಿ ಕೊಳ್ಳಲಾಗುತ್ತಿದೆ.