ಇಂದಿನಿಂದ ಶಾಲಾ-ಕಾಲೇಜುಗಳು ಪುನಾರಂಭ.. ಹುಬ್ಬಳ್ಳಿಯಲ್ಲಿ ಕಲಿಯುವ ಮಕ್ಕಳಲ್ಲಿ ಲವಲವಿಕೆ! - ಹುಬ್ಬಳ್ಳಿ ಜೆಜಿ ವಾಣಿಜ್ಯ ಮಹಾವಿದ್ಯಾಲಯ
ಹುಬ್ಬಳ್ಳಿ : ಕೋವಿಡ್ ಕಾರಣಕ್ಕೆ ಲಾಕ್ ಆಗಿದ್ದ ಶಾಲಾ-ಕಾಲೇಜುಗಳು 10 ತಿಂಗಳ ಬಳಿಕ ಇದೀಗ ಮತ್ತೆ ಆರಂಭವಾಗಿವೆ. ಹೊಸ ವರ್ಷಕ್ಕೆ ಹೊಸ ತರಗತಿಗಳು ಶುರುವಾಗಿದ್ದು, ಹುಬ್ಬಳ್ಳಿ ಜೆಜಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮೊದಲ ದಿನವೇ 45 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದು, ವಿದ್ಯಾರ್ಥಿಗಳ ಪೋಷಕರು ಕೂಡ ಮಕ್ಕಳನ್ನು ಶಾಲೆ-ಕಾಲೇಜುಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.