ಬಾಲಕನ ಬಲಿ ಪಡೆದ ಯಮರೂಪಿ ಶಾಲಾ ವಾಹನ: ಮುಗಿಲು ಮುಟ್ಟಿದ ಪೋಷಕ ಆಕ್ರಂದನ - school boy Death in Hebbagodi Bengaluru
ಆತ ಪುಟ್ಟ ಬಾಲಕ. ಈಗಷ್ಟೆ ಎಲ್ಕೆಜಿಗೆ ಹೋಗಲು ಶುರು ಮಾಡಿದ್ದ. ಪ್ರತಿದಿನ ಶಾಲಾ ವಾಹನದಲ್ಲೇ ಶಾಲೆಗೆ ಹೋಗೋದು ಬರೋದು ಮಾಡ್ತಿದ್ದ. ಹೀಗಿರುವಾಗ ಒಂದು ದಿನ ಶಾಲೆ ಬೇಗ ಬಿಟ್ಟಿತ್ತು. ಶಾಲೆ ಬಿಡ್ತಲ್ಲಪ್ಪ, ಇವತ್ತಾದ್ರು ಬೇಗ ಮನೆಗೆ ಹೋಗೋಣ ಅಂತ ವ್ಯಾನ್ ಏರಿ ಮನೆ ಕಡೆ ಹೊರಟಿದ್ದ. ಆದ್ರೆ ಆ ವ್ಯಾನ್ ಡ್ರೈವರ್ ಮಾಡಿದ ಒಂದೇ ಒಂದು ಯಡವಟ್ಟು ಬಾಳಿ ಬದುಕಬೇಕಿದ್ದ ಆ ಪುಟ್ಟ ಮಗುವನ್ನು ಬಾರದ ಲೋಕಕ್ಕೆ ಕಳಿಸಿದೆ.