ಚಿಲ್ಲೂರು ಬಡ್ನಿಯಲ್ಲಿ ಹಕ್ಕು ಚಲಾಯಿಸಿದ ಸರಿಗಮಪ ರನ್ನರ್ಅಪ್ ಹನುಮಂತ್ - undefined
ಸವಣೂರು ತಾಲೂಕು ಚಿಲ್ಲೂರು ಬಡ್ನಿಯಲ್ಲಿ ಸರಿಗಮಪ ರನ್ನರ್ಅಪ್ ಹನುಮಂತ ಲಮಾಣಿ ಮತದಾನ ಮಾಡಿದರು. ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಚಿಲ್ಲೂರು ಬಡ್ನಿಯ ಮತಗಟ್ಟೆ ನಂ.116 ರಲ್ಲಿ ಹನುಮಂತ್ ತಮ್ಮ ಹಕ್ಕು ಚಲಾಯಿಸಿದರು. ಹನುಮಂತ್ ಲಮಾಣಿ ಹಾವೇರಿ ಜಿಲ್ಲೆಯ ಚುನಾವಣಾ ಪ್ರಚಾರ ರಾಯಭಾರಿಯೂ ಆಗಿದ್ದು, ಇಲ್ಲಿಯವರೆಗೆ ಮತದಾನದ ಜಾಗೃತಿ ಮೂಡಿಸಿದ್ದರು.
Last Updated : Apr 23, 2019, 4:47 PM IST