ದಸರಾ ಪ್ರೋಗ್ರಾಂನಲ್ಲಿ ಬ್ಯುಸಿಯಾಗಿದ್ದ ಸಂಜಿತ್ ಹೆಗ್ಡೆ ಏನ್ ಹೇಳ್ತಾರೆ ಗೊತ್ತಾ? - ಸಂಚಿತ್ ಹೆಗ್ಡೆ
ಕಿರಿ ವಯಸ್ಸಲ್ಲೇ ಸ್ಟಾರ್ ಸಿಂಗರ್ ಪಟ್ಟ ಮುಡಿಗೇರಿಸಿಕೊಂಡಿರೋ ಸಂಜಿತ್ ಹೆಗ್ಡೆ ಸದ್ಯ ದಸರಾ ಕಾರ್ಯಕ್ರಮಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇವರ ಮುಂದಿನ ಪ್ರಾಜೆಕ್ಟ್ ಏನು ಅಂತ ಕೇಳಿದ್ರೆ, ಸದ್ಯ ನಾನು ಕಲಿಕೆಯಲ್ಲಿ ತೊಡಗಿಕೊಂಡಿದ್ದೇನೆ. ಸಿನಿಮಾಗಳಿಗೆ ಹಾಡೋದಕ್ಕೆ ಕೊಂಚ ಬ್ರೇಕ್ ನೀಡಿದ್ದು, ಒಂದು ಆಲ್ಬಮ್ ಕೆಲಸದಲ್ಲಿ ನಿರತನಾಗಿದ್ದೇನೆ. ಶೀಘ್ರದಲ್ಲೇ ಆಲ್ಬಂ ರಿಲೀಸ್ ಆಗಲಿದ್ದು, ದೇಶದಾದ್ಯಂತ ಇದಕ್ಕಾಗಿ ಓಡಾಡಲಿದ್ದೇನೆ ಎಂದ್ರು. ದಸರಾ ಹಬ್ಬದ ಅಂಗವಾಗಿ ಮಂತ್ರಿ ಸ್ಕೈರ್ ಮಾಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಾಡಿ, ಅಭಿಮಾನಿಗಳ ಮನ ಗೆದ್ದರು. ಹಾಗೆಯೇ ದಸರಾ ಹಬ್ಬದ ಅಂಗವಾಗಿ, ಮಹಿಷ ಮರ್ದಿನಿ ಯಕ್ಷಗಾನವನ್ನು ಕಲಾಕೃತಿ ಆರ್ಟ್ ಫೌಂಡೇಶನ್ ಪ್ರಸ್ತುತ ಪಡಿಸಿತು. ಅಲ್ಲದೆ ನಾಲ್ಕು ದಿನಗಳಿಂದ ಭರತನಾಟ್ಯ, ಯಕ್ಷಗಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.