ನಾಳೆಯಿಂದ ಶಾಲೆ ಶುರು: ಕೊಠಡಿಗಳಿಗೆ ಸ್ಯಾನಿಟೈಜರ್ ಸಿಂಪಡಣೆ - ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿ
ಹಾವೇರಿ: ಶುಕ್ರವಾರ ಎಸ್ಎಸ್ಎಲ್ಸಿ ಮತ್ತು ಪಿಯುಸಿ ದ್ವಿತೀಯ ವರ್ಗದ ತರಗತಿಗಳು ಪ್ರಾರಂಭವಾಗಲಿವೆ. 6ರಿಂದ 9ನೇ ತರಗತಿವರೆಗೆ ವಿದ್ಯಾಗಮ ಶುರುವಾಗಲಿದೆ. ಹಾವೇರಿಯಲ್ಲಿ ಶಾಲೆಗಳನ್ನ ಸ್ವಚ್ಛಗೊಳಿಸಲಾಯಿತು. ತರಗತಿ ನಡೆಯುವ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಯಿತು. ಪ್ರತಿ ಡೆಸ್ಕ್ಗೆ ಸ್ಯಾನಿಟೈಜರ್ ಸಿಂಪಡಿಸಲಾಯಿತು. ಈಗಾಗಲೇ ಶಾಲಾ ಸಿಬ್ಬಂದಿ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಶಾಲೆಗೆ ಬರುವ ಮಕ್ಕಳನ್ನು ಪೋಷಕರ ಅನುಮತಿ ಪತ್ರ ನೀಡಿದರೆ ಮಾತ್ರ ತರಗತಿಗೆ ತಗೆದುಕೊಳ್ಳುತ್ತೇವೆ. ಪೋಷಕರ ಅನುಮತಿ ಇಲ್ಲದೇ ಮಕ್ಕಳನ್ನು ಶಾಲೆಗೆ ಸೇರಿಸುವುದಿಲ್ಲ. ಶಾಲೆಗೆ ಬರುವ ಮಕ್ಕಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಜರ್ ಕಡ್ಡಾಯ. ಮಕ್ಕಳು ಮನೆಯಿಂದಲೇ ಕುಡಿಯಲು ನೀರು ತರಬೇಕು. ಮಕ್ಕಳನ್ನು ಶಾಲೆಗೆ ಸ್ವಾಗತಿಸಲು ಕಾತುರರಾಗಿದ್ದೇವೆ ಎಂದು ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು ತಿಳಿಸಿದರು.