ಸಕ್ಕರೆ ನಾಡು ಮಂಡ್ಯದಲ್ಲಿ ಸ್ಯಾಂಡಲ್ವುಡ್ ನಟಿ ಪ್ರೇಮ: ಹೊಳೆ ಆಂಜನೇಯನಿಗೆ ಹರಕೆ
ಮಂಡ್ಯ ಜಿಲ್ಲೆ ಮದ್ದೂರಿನ ಹೊಳೆ ಆಂಜನೇಯ ದೇವಾಲಯಕ್ಕೆ ಮುಂಜಾನೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಪ್ರತಿ ಶನಿವಾರ ದೇವಸ್ಥಾನದಲ್ಲಿ ವಿಶೇಷ ಪೂಜೆ ಕೈಂಕರ್ಯ ನಡೆಯುತ್ತದೆ.ಈ ಹಿನ್ನೆಲೆ ಪ್ರೇಮ ಸ್ನೇಹಿತರೊಂದಿಗೆ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಒಂದು ಕಾಲು ರೂಪಾಯಿ ಹರಕೆ ಕಟ್ಪಿಕೊಂಡ್ರೆ ಇಷ್ಟಾರ್ಥ ನೆರವೇರಲಿದೆ ಅನ್ನೋ ಪ್ರತೀತಿ ಈ ದೇವಾಲಯದ್ದಾಗಿದ್ದು, ಪ್ರೇಮ ಕೂಡ ಹರಕೆ ಕಟ್ಟಿದ್ದಾರೆ.ಇನ್ನೂ ಇತ್ತೀಚೆಗೆಷ್ಟೇ ಮೈಸೂರು ರಾಜವಂಶಸ್ಥ ಯಧುವೀರ ಒಡೆಯರ್ ಭೇಟಿ ನೀಡಿ ಹರಕೆ ಕಟ್ಟಿಕೊಂಡಿದ್ರು ಅನ್ನೋದು ವಿಶೇಷ. ಸಿನಿಮಾ, ರಾಜಕೀಯ ಕ್ಷೇತ್ರದ ಹಲವು ಗಣ್ಯರು ಕೂಡ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿ ಹೋಗುತ್ತಿದ್ದಾರೆ.