ಪರವಾನಗಿ ಇಲ್ಲದೆ ಮರಳು ಸಾಗಾಟ.. ನೆಲಮಂಗಲ ಪೊಲೀಸರಿಂದ ಲಾರಿ ಜಪ್ತಿ - ನೆಲಮಂಗಲ ಪೊಲೀಸರಿಂದ ಮರಳು ಲಾರಿ ಜಪ್ತಿ
ಯಾವುದೇ ಪರವಾನಗಿ ಇಲ್ಲದೆ ಬೆಂಗಳೂರು ಹೊರವಲಯ ರಾಷ್ಟ್ರೀಯ ಹೆದ್ದಾರಿ 48ರ ನೆಲಮಂಗಲದ ಕುಣಿಗಲ್ ಬೈಪಾಸ್ ಬಳಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಲಾರಿಗಳ ಮೇಲೆ ಕಾರ್ಯಾಚರಣೆ ನಡೆಸಿದ ನೆಲಮಂಗಲ ಟೌನ್ ಪೊಲೀಸರು, ಲಾರಿಗಳನ್ನು ಜಪ್ತಿ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. ಲಾರಿಗಳನ್ನು ಅಡ್ಡಗಟ್ಟುತ್ತಿದ್ದಂತೆ ಸ್ಥಳದಲ್ಲೇ ಲಾರಿ ನಿಲ್ಲಿಸಿ ಚಾಲಕರು ಪರಾರಿಯಾಗಿದ್ದು, ವಾಹನದ ನೊಂದಣಿ ಸಂಖ್ಯೆ ಆಧರಿಸಿ ಲಾರಿ ಮಾಲೀಕ ಹಾಗೂ ಚಾಲಕನ ಮೇಲೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.