ಕರ್ನಾಟಕ

karnataka

ETV Bharat / videos

ಟೈರ್ ಬ್ಲಾಸ್ಟ್ ಆಗಿ ಧಗಧಗನೆ ಹೊತ್ತಿ ಉರಿದ ಮರಳು ತುಂಬಿದ ಟಿಪ್ಪರ್​ - ಯಾದಗಿರಿಯಲ್ಲಿ ಟಿಪ್ಪರ್​ ಟೈರ್ ಬ್ಲಾಸ್ಟ್ ಸುದ್ದಿ

By

Published : Jun 5, 2020, 3:18 PM IST

ಯಾದಗಿರಿ ನಗರದಿಂದ ಕಲಬುರಗಿ ಜಿಲ್ಲೆಯತ್ತ ಮರಳು ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್ ವಾಹನದ ಟೈರ್ ಬ್ಲಾಸ್ಟ್ ಆದ ಪರಿಣಾಮ ಇಡೀ ವಾಹನ ಹೊತ್ತಿ ಉರಿದಿದೆ. ಈ ಘಟನೆ ಯಾದಗಿರಿ ನಗರದ ಹೊರಭಾಗದಲ್ಲಿ ನಡೆದಿದೆ. ಸುದೈವವಶಾತ್‌ ದುರ್ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಟಿಪ್ಪರ್ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದು, ಓವರ್​​ಲೋಡ್​​ನಿಂದ ಟೈರ್ ಬ್ಲಾಸ್ಟ್ ಆಗಿದೆ ಅಂತ ಹೇಳಲಾಗುತ್ತಿದೆ. ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸಲಾಗಿದೆ. ಈ ಕುರಿತು ಸಂಚಾರಿ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details