ಉಡುಪಿ: ಬೀಚ್ನಲ್ಲಿ ಗಮನ ಸೆಳೆದ 'ವೆಲ್ಕಮ್ ವ್ಯಾಕ್ಸಿನ್' ಮರಳು ಶಿಲ್ಪ - ಉಡುಪಿ ಸುದ್ದಿ
ಉಡುಪಿ: ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಹಿನ್ನೆಲೆಯಲ್ಲಿ ಕುಂದಾಪುರದ ಕೋಡಿ ಬೀಚ್ನಲ್ಲಿ ಕಲಾವಿದರು ವ್ಯಾಕ್ಸಿನ್ನ್ನು ಮರಳು ಶಿಲ್ಪದೊಂದಿಗೆ ಬರಮಾಡಿಕೊಂಡಿದ್ದಾರೆ. ಆರೋಗ್ಯಕರ ಸುಗಮ ಜೀವನ ಸಾಗಿಸುವಂತಾಗಲಿ ಎಂಬ ಧ್ಯೇಯ ವಾಕ್ಯದೊಂದಿಗೆ ಕೋಟೇಶ್ವರ ಹಳೆ ಅಳಿವೆ ಬೀಚ್ನಲ್ಲಿ 'ವೆಲ್ಕಮ್ ವ್ಯಾಕ್ಸಿನ್' ಎಂಬ ಮರಳು ಶಿಲ್ಪ ರಚಿಸಲಾಗಿದೆ. ಸ್ಯಾಂಡ್ ಥೀಂ ಕಲಾವಿದರಾದ ಹರೀಶ್ ಸಾಗ, ರಾಘವೇಂದ್ರ ಈ ಮರಳು ಶಿಲ್ಪವನ್ನು ರಚಿಸಿದ್ದಾರೆ.