ಮಲ್ಪೆ ಬೀಚ್ನಲ್ಲಿ ಸ್ಯಾಂಡ್ ಥೀಮ್ ಮೂಲಕ ಪೇಜಾವರ ಶ್ರೀಗಳಿಗೆ ಶ್ರದ್ಧಾಂಜಲಿ - ಮಲ್ಪೆ ಬೀಚ್ನಲ್ಲಿ ಪೇಜಾವರ ಶ್ರೀಗಳಿಗೆ ಅಂತಿಮ ನಮನ
ಉಡುಪಿ: ಮಲ್ಪೆ ಬೀಚ್ನಲ್ಲಿ ಸ್ಯಾಂಡ್ ಥೀಮ್ ಮೂಲಕ ಪೇಜಾವರ ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಲಾಯಿತು. ಪಂಚ ಪರ್ಯಾಯ ಸಾಧಕರಾದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯ ಶಿಲ್ಪವನ್ನು ಮರಳಿನಲ್ಲಿ ಮಾಡಿ, ಕುಂದಾಪುರದ ಸ್ಯಾಂಡ್ ಥೀಮ್ ಬಳಗ ಶ್ರದ್ಧಾಂಜಲಿ ಅರ್ಪಿಸಿದರು. ಇನ್ನು ಸುತ್ತ ನೆರೆದಿದ್ದವರಿಂದ 88 ಮೊಂಬತ್ತಿಯನ್ನು ಬೆಳಗಿಸಿ ಸಂತಾಪ ಸೂಚಿಸಲಾಯಿತು.