ಹುಕ್ಕೇರಿ ಮಠದಲ್ಲಿ ಸದಾಶಿವ ಶ್ರೀಗಳಿಂದ ಮೌನ ಅನುಷ್ಠಾನ ಮಂಗಲ ಕಾರ್ಯಕ್ರಮ - Sadashiva Sri
ಹಾವೇರಿ ಜಿಲ್ಲೆಯ ಹುಕ್ಕೇರಿ ಮಠದಲ್ಲಿ ನಡೆದ ಸದಾಶಿವ ಶ್ರೀಗಳ ಒಂದು ತಿಂಗಳ ಮೌನ ಅನುಷ್ಠಾನ ಮಂಗಲ ಕಾರ್ಯಕ್ರಮದಲ್ಲಿ ಅಕ್ಕಿ ಆಲೂರಿನ ಶಿವಬಸವ ಮತ್ತು ಕೂಡಲದ ಮಹೇಶ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಲಿಂಗೈಕ್ಯ ಶ್ರೀಗಳಾದ ಶಿವಬಸವ ಮತ್ತು ಶಿವಲಿಂಗ ಶ್ರೀಗಳ ಗದ್ದುಗೆಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಲೋಕ ಕಲ್ಯಾಣಾರ್ಥವಾಗಿ ಶ್ರೀಗಳು ಮೌನ ಅನುಷ್ಠಾನ ನಡೆಸಿದ್ದು, ಶ್ರೀಗಳ ಆಶಯದಂತೆ ಆದಷ್ಟು ಬೇಗ ಕೊರೊನಾ ವಿಶ್ವದಿಂದ ತೊಲಗಲಿ ಎಂದು ಅಕ್ಕಿ ಆಲೂರಿನ ಶಿವಬಸವ ಶ್ರೀಗಳು ಆಶಿಸಿದರು.