ಹನ್ನೆರಡು ವರ್ಷ ತುಂಬಿದ ಕರ್ನಾಟಕದ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಸಂಭ್ರಮ-ಸಡಗರ. - Ananthagiri Siddhivinayak Ayyappa Swamy Temple
ಅಯ್ಯಪ್ಪ ಸ್ವಾಮಿ ಅಂದ್ರೆ ನಮಗೆ ತಕ್ಷಣ ನೆನಪಾಗೋದು ಕೇರಳದ ಶಬರಿಮಲೆ. ಆದ್ರೆ ನಮ್ಮ ರಾಜ್ಯದಲ್ಲೂ ಒಂದು ಅಯ್ಯಪ್ಪ ಸ್ವಾಮಿ ದೇವಾಲಯವಿದೆ. ಇಲ್ಲಿ ಥೇಟ್ ಶಬರಿಮಲೆಯ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ನಡೆಯುವಂತೆಯೇ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಅಷ್ಟೇ ಅಲ್ಲದೇ ಈ ಅಯ್ಯಪ್ಪನ ದೇವಸ್ಥಾನವೂ ಶಬರಿಮಲೆಯನ್ನೇ ಹೋಲುತ್ತದೆ. ಹಾಗಾದ್ರೆ ಕರುನಾಡಿನ ಆ ಶಬರಿಮಲೆ ಯಾವುದೂ ಅನ್ನುವ ಕುತೂಹಲವೇ, ಹೇಳ್ತೀವಿ ನೋಡಿ...