ಸ್ಮಾರಕವಾಗಲಿದೆ ಮಾಜಿ ಸಿಎಂ ಎಸ್.ನಿಜಲಿಂಗಪ್ಪ ಮನೆ - ಚಿತ್ರದುರ್ಗ ನಗರದ ವಿಪಿ ಬಡವಣೆಯಲ್ಲಿರುವ ವೈಟ್ಹೌಸ್
ಚಿತ್ರದುರ್ಗ: ಹದಿನೆಂಟು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಾಜಿ ಸಿಎಂ ಎಸ್.ನಿಜಲಿಂಗಪ್ಪನವರ ಮನೆಯನ್ನು ಸ್ಮಾರಕ ಮಾಡಲು ರಾಜ್ಯ ಬಿಜೆಪಿ ಸರ್ಕಾರ ಅಸ್ತು ಎಂದಿದೆ. ಬಜೆಟ್ನಲ್ಲಿ ಸ್ಮಾರಕ ಮಾಡಿ ಪ್ರವಾಸೋದ್ಯಮ ಇಲಾಖೆಗೆ ಅನುಕೂಲವಾಗುವಂತೆ ಐದು ಕೋಟಿ ಮೀಸಲಿಡುವುದಾಗಿ ಘೋಷಣೆ ಮಾಡಲಾಗಿದೆ. ಚಿತ್ರದುರ್ಗ ನಗರದ ವಿಪಿ ಬಡವಣೆಯಲ್ಲಿರುವ ವೈಟ್ಹೌಸ್ ಇದಾಗಿದೆ. ಎಸ್.ನಿಜಲಿಂಗಪ್ಪ ಸ್ಮಾರಕ ನಿರ್ಮಾಣ ಹೋರಾಟ ಸಮಿತಿಯ ಹೋರಾಟಗಾರ ಶಂಕ್ರಪ್ಪ, ವೈಟ್ಹೌಸ್ನ್ನು ಸ್ಮಾರಕ ಮಾಡುವಂತೆ ಮನವಿ ಮಾಡಿದ್ದರು.