ಕೊಳ್ಳೇಗಾಲದಲ್ಲಿ ಕಳೆಗಟ್ಟಿದ ಗ್ರಾಮೀಣ ದಸರಾ: ಕುಣಿದು ಕುಪ್ಪಳಿಸಿದ ಶಾಸಕ ಮಹೇಶ್ - ಹನೂರು ಶಾಸಕ ಆರ್.ನರೇಂದ್ರ
ಚಾಮರಾಜನಗರದಲ್ಲಿ ಜಿಲ್ಲಾ ದಸರಾ ಮುಕ್ತಾಯಗೊಂಡು ಇಂದಿನಿಂದ ಕೊಳ್ಳೇಗಾಲದ ಗ್ರಾಮೀಣ ದಸರಾ ವೈಭವ ರಂಗು ಪಡೆದಿದೆ. ಈ ಗ್ರಾಮೀಣ ದಸರಾಗೆ ಹನೂರು ಶಾಸಕ ಆರ್.ನರೇಂದ್ರ ಹಾಗೂ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಡೊಳ್ಳು ಸದ್ದಿಗೆ ಯುವಕರು ಹೆಜ್ಜೆ ಹಾಕುತ್ತಿದ್ದನ್ನು ಕಂಡ ಶಾಸಕ ಎನ್.ಮಹೇಶ್ ಕೂಡಾ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಇದರಿಂದ ಉತ್ಸಾಹ ಪಡೆದ ಯುವಕರು ಮತ್ತಷ್ಟು ಜೋಶ್ನಿಂದ ಕುಣಿದು ಕುಪ್ಪಳಿಸಿದ್ದಾರೆ.