ಮಳೆರಾಯನ ಆರ್ಭಟ... ರುದ್ರಾಕ್ಷಿ ಮಠದ ಗೋಡೆ ಕುಸಿತ! - ರುದ್ರಾಕ್ಷಿ ಮಠ
ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ನಿರಂತರ ಮಳೆಯಾಗುತ್ತಿದ್ದು, ಮಳೆಯ ಆರ್ಭಟಕ್ಕೆ ಜಿಲ್ಲೆಯಲ್ಲಿರುವ ರುದ್ರಾಕ್ಷಿ ಮಠದ ಗೋಡೆಗಳು ಸಂಪೂರ್ಣವಾಗಿ ಕುಸಿದಿವೆ. ಮಂಗಳವಾರಪೇಟೆಯಲ್ಲಿರುವ ರುದ್ರಾಕ್ಷಿ ಮಠದ ಗೋಡೆ ಕುಸಿದ ಪರಿಣಾಮ ಬೈಕ್ವೊಂದು ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಮಳೆಯಿಂದ ಗೋಡೆಗಳೆಲ್ಲ ಶಿಥಿಲಗೊಂಡು ಕುಸಿದಿವೆ ಎನ್ನಲಾಗುತ್ತಿದೆ. ಇನ್ನು ಸ್ಥಳಕ್ಕೆ ಮಠದ ಸ್ವಾಮಿಗಳು, ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.