ಕರ್ನಾಟಕ

karnataka

By

Published : Mar 3, 2021, 7:17 AM IST

ETV Bharat / videos

ಕಾರಿನಲ್ಲಿ 7.9 ಕೋಟಿ ರೂ. ಮೌಲ್ಯದ ನಕಲಿ ನೋಟು ಸಾಗಣೆ: ಮೂವರ ಬಂಧನ

ಕೊರಾಪುಟ್ (ಒಡಿಶಾ): ಕಾರಿನಲ್ಲಿ 7.9 ಕೋಟಿ ರೂ. ಮೌಲ್ಯದ ಖೋಟಾನೋಟು ಸಾಗಿಸುತ್ತಿದ್ದ ಛತ್ತೀಸ್​​ಗಢ ಮೂಲದ ಮೂವರು ಆರೋಪಿಗಳನ್ನು ಕೊರಾಪುಟ್ ಜಿಲ್ಲೆಯ ಸುಂಕಿ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ. ಎಲ್ಲವೂ 500 ರೂ. ಮುಖ ಬೆಲೆಯ ನಕಲಿ ನೋಟುಗಳಾಗಿದ್ದು, ತಪಾಸಣೆ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಖೋಟಾನೋಟುಗಳನ್ನು ರಾಯಪುರದಿಂದ ವಿಶಾಖಪಟ್ಟಣಂ ಕಡೆಗೆ ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details