ಆರ್.ಆರ್ ನಗರ ಉಪಚುನಾವಣೆ: ಕೆಲವೊಂದು ವಾರ್ಡ್ಗಳಲ್ಲಿ ಬಿರುಸಿನ ಮತದಾನ - RR Nagar by-election latest news
ಬೆಂಗಳೂರು: ಆರ್.ಆರ್ ನಗರದಲ್ಲಿ ಮತದಾನ ಪ್ರಕ್ರಿಯೆ ಮುಂಜಾನೆ ಮಂದಗತಿಯಲ್ಲಿ ಸಾಗುತ್ತಿದ್ದು, ಸದ್ಯ ಬಿಸಿಲನ್ನೂ ಲೆಕ್ಕಿಸದೆ ಕೆಲವರು ಮತ ಹಾಕಲು ಬಂದಿದ್ದಾರೆ. ಲಕ್ಷ್ಮಿ ದೇವಿ ನಗರ ವಾರ್ಡ್ನಲ್ಲಿ ಸರತಿ ಸಾಲಿನಲ್ಲಿ ನಿಂತ ಮತದಾರರು ಮಧ್ಯಾಹ್ನವಾಗುತ್ತಿದಂತೆ ತುಸು ವೇಗವಾಗಿ ಬಂದು ಮತದಾನ ಮಾಡಿದ್ದಾರೆ. ಬೆಳಗ್ಗೆ ಮತಗಟ್ಟೆಗಳು ಬಿಕೋ ಎನ್ನುತ್ತಿದ್ದವು. ಮಧ್ಯಾಹ್ನವಾಗುತ್ತಿದಂತೆ ಲಕ್ಷ್ಮಿ ನಗರ ವಾರ್ಡ್ನಲ್ಲಿ ಮತದಾನಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೊಲೀಸರು, ಮಿಲಿಟರಿ ಪಡೆ ಹೈ ಅಲರ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದೆ.